Tippu Sultan Jayanti in Karnataka - An opinion for BJP leader Tejaswi Surya

ಇಂದು ಟಿಪ್ಪೂ ಸುಲ್ತಾನನ ಜಯಂತಿ. ನಾಳೆ ಯಾಕುಬ್ ಮೆಮನ್ನ ಜಯಂತಿ?
ನನ್ನ ಇಬ್ಬರು ಅನುಯಾಯಿಗಳನ್ನು ಮೀರ್ ಹುಸೇನ್ ಅಲಿ ಅವರ ಜೊತೆಯಲ್ಲಿ ಕಳಿಸಿಕೊಡುತ್ತಿದ್ದೇನೆ. ಅವರೊಂದಿಗೆ ಸೇರಿ, ಎಲ್ಲ ಹಿಂದೂಗಳನ್ನೂ ನೀವು ಸೆರೆಹಿಡಿದು ಕೊಲ್ಲಬೇಕು. ೨೦ ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಸೆರೆಮನೆಯಲ್ಲಿಟ್ಟಿರಬೇಕು. ಉಳಿದವರಲ್ಲಿ ೫,೦೦೦ ಮಂದಿಯನ್ನು ಮರದ ಕೊಂಬೆಗಳಗೆ ನೇಣುಹಾಕಿ ಕೊಲ್ಲಬೇಕು. ಇದು ನನ್ನ ಕಟ್ಟಪ್ಪಣೆ.


ಈ ಸಾಲುಗಳನ್ನು ಬರೆದವರು ಯಾರು ಗೊತ್ತೇ ? ೧೪ ಡಿಸೆಂಬರ್, ೧೭೮೮ರಲ್ಲಿ ಕಲ್ಲಿಕೋಟೆಯಲ್ಲಿದ್ದ ತನ್ನ ಸೇನಾಪತಿಗೆ ಟಿಪ್ಪೂ ಸುಲ್ತಾನ್ ಬರೆದ ಪತ್ರದಲ್ಲಿನ ಸಾಲುಗಳಿವು. ಹೌದು, ಇಂದು ಪ್ರಥಮ ಸ್ವಾತಂತ್ರ್ಯ ಹೋರಾಟಗಾರ, ಧರ್ಮ ಸಹಿಷ್ಣುತೆಯ ಹರಿಕಾರ, ಜಾತ್ಯಾತೀತ ಆಡಳಿತಗಾರ, ಎಂಬೆಲ್ಲಾ ಬಿರುದುಗಳಿಂದ ಭೂಷಿತವಾಗಿರುವ, ಆ ಮೈಸೂರು ಹುಲಿ ಟಿಪ್ಪು ಸುಲ್ತಾನನೇ ಸ್ವತಃ ಬರೆದ ಸಾಲುಗಳು. ಟಿಪ್ಪೂವಿನ ಈ ನೈಜ ಕ್ರೌರ್ಯ ಮುಖವನ್ನು ಮುಚ್ಚಿ, ಅವನನ್ನು ಒಬ್ಬ ಸೂಫಿ ಸಂತನಂತೆ, ಶಾಂತಿ ದೂತನಂತೆ ಚಿತ್ರಿಸಿ, ಅವನ ಜಯಂತಿಯನ್ನು ವಿಜೃಂಬಣೆಯಿಂದ ರಾಜ್ಯ ಸರ್ಕಾರವು ಆಚರಿಸಲಿಕ್ಕೆ ಹೊರಟಿರುವುದು ಸಮಸ್ತ ಕನ್ನಡಿಗರಿಗೆ ಹಾಗೂ ದೇಶದ ಇತಿಹಾಸಕ್ಕೆ ಎಸಗುತ್ತಿರುವ ಘೋರ ಅನ್ಯಾಯ. ಇಷ್ಟಕ್ಕೂ, ಇಂದು ಟಿಪ್ಪೂವನ್ನು ಸ್ವಾತಂತ್ರ್ಯ ಹೋರಾಟಗಾರನಾಗಿ, ಸರ್ವಧರ್ಮ ಸಹಿಷ್ಣುವಾಗಿ ಬಿಂಬಿಸಲು ಹೊರಟಿರುವ ಮಾರ್ಕ್ಸ್ವಾದಿ ಬುದ್ಧಿಜೀವಿಗಳು ಮತ್ತು ಸ್ವಘೋಷಿತ ಇತಿಹಾಸ ತಜ್ಞರುಗಳು ತಮ್ಮ ವಾದವನ್ನು ಸಮರ್ಥಿಸಲು ಒಂದೇ ಒಂದು ಐತಿಹಾಸಿಕ ದಾಖಲೆಯನ್ನು ನೀಡಿಲ್ಲ.
ನೀಡುವುದಕ್ಕೆ ಸಾಧ್ಯವೂ ಇಲ್ಲ. ಯೇಕೆಂದರೆ, ಟಿಪ್ಪೂವಿನ ಕಾಲದ ಇತಿಹಾಸದ ಮೂಲ ಆಕಾರಗಳನ್ನು ಗಮನಿಸಿದಾಗ ಟಿಪ್ಪೂವಿನ ನಿಜ ಸ್ವರೂಪ ತೆರೆದುಕೊಳ್ಳುತ್ತದೆ. ಅವನೊಬ್ಬ fanatic ಮುಸ್ಲಿಮನೆಂದೂ, ಸಾವಿರಾರು ಹಿಂದೂ ದೇವಸ್ಥಾನಗಳನ್ನು ನೆಲಕ್ಕುರುಳಿಸಿದ ಮತಾಂಧನೆಂದೂ, ಲಕ್ಷಾಂತರ ಹಿಂದೂ ಮತ್ತು ಕ್ರಿಶ್ಚಿಯನ್ನರನ್ನು ಮಾರಣಹೋಮಗೈದ ಕ್ರೂರಿಯೆಂದೂ, ಈ ನೆಲದ ಭಾಷೆಯನ್ನು ಅಳಿಸಿ ಅದರ ಜಾಗಕ್ಕೆ ಫಾರ್ಸಿ ಭಾಷೆಯನ್ನು ಹೇರಿದ್ದ ಕನ್ನಡ ವಿರೋಧಿಯೆಂದೂ ಸ್ಪಷ್ಟವಾಗಿ ತಿಳಿಯುತ್ತದೆ. ಈ ಸಂಬಂಧ ರಾಶಿ ರಾಶಿ ಇತಿಹಾಸದ ಮೂಲ ಸಾಕ್ಷ್ಯಗಳಿದ್ದರೂ, ತಮ್ಮ ಕಾಗಕ್ಕ-ಗುಬ್ಬಕ್ಕನ ಕಥೆಯನ್ನ ಹೇಳಿ ಇತಿಹಾಸದ ಒಬ್ಬ ಖಳನಾಯಕನನ್ನು, ಹಿರೋ ಮಾಡಲು ಹೊರಟಿರುವ ನಮ್ಮ ಮಾರ್ಕ್ಸ್ವಾದಿ ಬುದ್ಧಿಜೀವಿಗಳ ಬಂಢ ಧೈರ್ಯಕ್ಕೆ ಹಾಗೂ ಇವರಿಗೆ ರಾಜಕೀಯ ಬೆಂಬಲ ನೀಡುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಳೆದುಹೋಗಿರುವ ಆತ್ಮಸಾಕ್ಷಿಗೆ ಏನು ಹೇಳೋಣ ?





ಟಿಪ್ಪೂ ಒಬ್ಬ ಮತಾಂಧ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನಾವು ಬಹಳ ದೂರಹೋಗಬೇಕಿಲ್ಲ.
ಅವನ ಖಡ್ಗದ ಮೇಲಿನ ಕೆತ್ತನೆಯನ್ನು ಗಮನಿಸದರೆ ಸಾಕು: ನನ್ನ ಗೆಲುವಿನ ಕೊಂಕುಕತ್ತಿ ಕಾಫೀರರ ವಿನಾಶಕ್ಕಾಗಿ ಇರುವ ಸಿಡಿಲೇ ಆಗಿದೆ... ಹೇ ಅಲ್ಲಾಹನೇ, ಮಹಮ್ಮದರ ಧರ್ಮವನ್ನು ಅಭಿವರ್ಧಿಸುವಂಥವನನ್ನು ಜಯಶಾಲಿಯಾಗಿಸು, ಮಹಮ್ಮದರ ಧರ್ಮವನ್ನು ನಿರಾಕರಿಸುವಂಥವನನನು ಹಾಳುಮಾಡು... ಈ ರೀತಿಯ ಸರ್ವ-ಧರ್ಮ-ಸಹಿಷ್ಣು ವಿಚಾರಗಳನ್ನು ತನ್ನ ಕತ್ತಿಯ ಮೇಲೆ ಕೆತ್ತಿಸಿದ್ದ ಟಿಪ್ಪೂವನ್ನು ಜಾತ್ಯಾತೀತ ಎಂದು ಕರೆಯಲು ಸಾಧ್ಯವೇ? ಅದಿರಲಿ, ಟಿಪ್ಪೂವಿನ ಆ ಕತ್ತಿ ಕಾಫೀರರ ಮೇಲೆ ಎಸಗಿದ ಕ್ರೌರ್ಯ ಹೇಗಿತ್ತು ಎಂಬುದನ್ನು ಸಾತ್ವಿಕರು ಇಂದು ಊಹೆ ಮಾಡುವುದೂ ಕಷ್ಟ. ಇಸ್ಲಾಂ ಧರ್ಮದ ಹೆಸರಿನಲ್ಲಿ ಟಿಪ್ಪೂ ನಡೆಸಿದ ಘೋರ ಕೃತ್ಯಗಳಿಗೆ ಪ್ರತ್ಯಕ್ಷ ಸಾಕ್ಷಿಗಳಾಗಿದ್ದವರಲ್ಲಿ ಒಬ್ಬನೆಂದರೆ ಪೋರ್ಚುಗೀಸ್ ಪ್ರವಾಸಿಯೂ, ಇತಿಹಾಸಕಾರನೂ ಆಗಿದ್ದ ಫಾದರ್ ಬಾರ್ತೋಲೋಮಿಯೋ. ತಾನು ೧೭೯೦ರಲ್ಲಿ ಟಿಪ್ಪೂವಿನ ಆಡಳಿತದಲ್ಲಿದ್ದ ಮಲಬಾರಿನಲ್ಲಿ ಏನು ಕಂಡೆನೆಂಬುದನ್ನು ಅವನು ಹೀಗೆ ದಾಖಲಿಸಿದ್ದಾನೆ: ಮೊದಲಿಗೆ ೩೦,೦೦೦ ಮಂದಿ ಅನಾಗರಿಕ ಸೈನಿಕರನ್ನೊಳಗೊಂಡಿದ್ದ ಸೇನಾಪಡೆಯೊಂದಿತ್ತು. ಅವರು ದಾರಿಯಲ್ಲಿ ಸಿಕ್ಕಿದ ಪ್ರತಿಯೊಬ್ಬರನ್ನು ತರಿದು ಹಾಕಿದರು. ಈ ಸೇನಾಪಡೆಯ ಹಿಂದೆ ೩೦,೦೦೦ ಮಂದಿ ಸೈನಿಕರನ್ನೊಳಗೊಂಡ ಇನ್ನೊಂದು ಸೇನಾಪಡೆಯಿತ್ತು. ಬಹುಪಾಲು ಗಂಡಸರನ್ನೂ, ಹೆಂಗಸರನ್ನೂ ಕಲ್ಲಿಕೋಟೆಯಲ್ಲಿ ನೇಣುಹಾಕಲಾಯಿತು. ಮೊದಲಿಗೆ ತಮ್ಮ ಮಕ್ಕಳನ್ನು ಕತ್ತಿಗೆ ನೇತುಹಾಕಲಾಗಿದ್ದ ತಾಯಂದಿರನ್ನು ನೇಣುಹಾಕಲಾಯಿತು. ಆ ಬರ್ಬರ ಸ್ವಭಾವದ ಟಿಪ್ಪೂ ಸುಲ್ತಾನ್, ನಗ್ನರಾಗಿದ್ದ ಕ್ರಿಶ್ಚಿಯನ್ನರನ್ನೂ, ಹಿಂದೂಗಳನ್ನೂ ಆನೆಗಳ ಕಾಲಿಗೆ ಕಟ್ಟಿಹಾಕಿ, ಆ ನಿಸ್ಸಹಾಯಕ ಬಲಿಪಶುಗಳ ಶರೀರಗಳು ಛಿದ್ರ ಛಿದ್ರವಾಗುವವರೆಗೆ ಆನೆಗಳನ್ನು ಓಡಿಸಿದನು. ದೇವಾಲಯಗಳಿಗೆ ಮತ್ತು ಚರ್ಚುಗಳಿಗೆ ಬೆಂಕಿ ಹಚ್ಚುವಂತೆ, ಅಪವಿತ್ರಗೊಳಿಸುವಂತೆ ಹಾಗೂ ನಾಶಪಡಿಸುವಂತೆ ಅಪ್ಪಣೆ ಮಾಡಿದನು. ಇಸ್ಲಾಮ್ ಮತಾಂತರದ ಗೌರವಕ್ಕೆ ಒಳಪಡಲು ನಿರಾಕರಿಸಿದಂಥ ಕ್ರಿಶ್ಚಿಯನ್ನರನ್ನು ನೇಣುಹಾಕುವ ಮೂಲಕ ಆಗಲೇ ಅಲ್ಲಿಯೇ ಕೊಲ್ಲುವಂತೆ ಅಪ್ಪಣೆ ಮಾಡಲಾಯಿತು. ಘೋರ ಕೃತ್ಯಗಳ ಬಗೆಗಿನ ಮೇಲಿನ ವರದಿ ಲಭಿಸಿದ್ದು ಟಿಪ್ಪೂವಿನ ಸೈನ್ಯದಿಂದ ತಪ್ಪಿಸಿಕೊಂಡು, ಕಾರ್ಮೈಕೇಲ್ ಕ್ರಿಶ್ಚಿಯನ್ ಮಿಶನ್ನಿನ ಕೇಂದ್ರಸ್ಥಾನವಾಗಿದ್ದ ವರಪ್ಪುಳಕ್ಕೆ ಬಂದು ಸೇರಿದ ನತದೃಷ್ಟರ ವಿಷಾದಪೂರ್ಣ ವಿವರಣೆಗಳಿಂದ. ದೋಣಿಗಳ ಮೂಲಕ ವರಪ್ಪುಳ ನದಿಯನ್ನು ದಾಟಲು ನಾನೇ ಅನೇಕ ನತದೃಷ್ಟರಿಗೆ ನೆರವಾದೆ. ಈ ರೀತಿಯ ಚಿತ್ರ-ವಿಚಿತ್ರ ಹಿಂಸೆಯನ್ನು ಮುಸ್ಲಿಮೇತರರಿಗೆ ನೀಡಿದ್ದ ಟಿಪ್ಪೂವನ್ನು ಧರ್ಮ ಸಹಿಷ್ಣು ಎಂದು ಬಿಂಬಿಲಸುಸಾಧ್ಯವೇ? ತನ್ನ ಸ್ವಂತ ಜನರನ್ನು, ಅವರು ಮುಸ್ಲಿಮರಲ್ಲವೆಂಬ ಒಂದೇ ಕಾರಣಕ್ಕೆ ಕಗ್ಗೊಲೆ ಮಾಡಿದ ಮತಾಂಧನನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಗೆ ತಾನೆ ಬಣ್ಣಿಸಲು ಸಾಧ್ಯ? ಭಾರತವನ್ನು ದಾರುಲ್-ಇಸ್ಲಾಮ್ ಮಾಡಬೇಕೆಂಬ ಉದ್ದೇಶದಿಂದ ಪ್ರಪಂಚದ ಇತರೆ ಮುಸ್ಲಿಮ್ ರಾಜರುಗಳಿಗೆ ಪತ್ರಗಳನ್ನು ಬರೆದು, ಭಾರತದ ಮೇಲೆ ದಾಳಿಮಾಡಿ ಎಂದು ಪರಿ ಪರಿಯಾಗಿ ಬೇಡಿಕೊಂಡ ಟಿಪ್ಪೂವನ್ನು ರಾಷ್ಟ್ರಭಕ್ತನೆಂದೂ, ಬ್ರಿಟೀಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ರಾಜನೆಂದು ಯಾವ ಬಾಯಿಯಿಂದ ತಾನೆ ಹೇಳಲು ಸಾಧ್ಯ?

ನಮ್ಮ ಊರಿನ ಹೆಸರುಗಳನ್ನೆಲ್ಲ ಬದಲಾಯಿಸಿ ಅವುಗಳಿಗೆ ಇಸ್ಲಾಮಿ ಹೆಸರಿನಿಂದ ಮರುನಾಮಕರಣ ಮಾಡಿದವನನ್ನು ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿದ ಪರಾಕ್ರಮಿಯೆಂದು ಬಿಂಬಿಸಲು ಸಾಧ್ಯವೇ? ಟಿಪ್ಪೂವಿಗೆ ಈ ನೆಲದ ಪುರಾತನ ಸಂಸ್ಕೃತಿಯ ಬಗ್ಗೆ ಎಷ್ಟು ಜಿಗುಪ್ಸೆ ಇತ್ತೆಂದರೆ ಅವನು ಮೈಸೂರು ರಾಜ್ಯದಲ್ಲಿ ಪ್ರಚಲಿತವಿದ್ದ ಹಿಂದೂ ಪಂಚಾಂಗ ವ್ಯವಸ್ಥೆಯನ್ನು, ತೂಕ-ಅಳತೆ ಮತ್ತು ನಾಣ್ಯ ವ್ಯವಸ್ಥೆಗಳ ಬದಲಾಗಿ ಇಸ್ಲಾಮಿ ಪಂಚಾಂಗವನ್ನು ಮತ್ತು ಅರಬ್ಬೀಯ ತೂಕ-ಅಳತೆ ವ್ಯವಸ್ಥೆಗಳನ್ನು ಹೇರಿಕೆ ಮಾಡಿದನು. ಅಷ್ಟೇ ಅಲ್ಲದೆ, ಮೈಸೂರಿನ ಜನಗಳ ಮನಸ್ಸಿನಿಂದ ಹಿಂದಿನ ಹಿಂದೂ ರಾಜರುಗಳ ನೆನಪನ್ನು ಅಳಿಸಿಹಾಕುವ ಸಲುವಾಗಿ, ಹಿಂದಿನ ರಾಜರುಗಳು ಕಟ್ಟಿಸಿದ್ದ, ಬಹು ಉಪಯುಕ್ತವಾಗಿದ್ದ ಕೆರೆ-ಕಟ್ಟೆಗಳನ್ನು ಟಿಪ್ಪು ಸುಲ್ತಾನ್ ನಾಶಪಡಿಸಿದ. ಇಂದಿಗೂ ಟಿಪ್ಪೂ ಆಳ್ವಿಕೆಯಲ್ಲಿದ್ದ ಭಾಗಗಳಲ್ಲಿ ಟಿಪ್ಪೂ ಕಟ್ಟಿಸಿದನೆಂಬ ಸಾರ್ವಜನಿಕ ಉಪಯೋಗಕ್ಕೆ ಬರುವ, ಒಂದೇ ಒಂದು ಜನೋಪಕಾರಿ ಯೋಜನೆಯಾಗಲೀ, ಕಟ್ಟಡವಾಗಲೀ ಇಲ್ಲದಿರುವುದು ಟಿಪ್ಪೂವಿನ ಕೇವಲ ದಬ್ಬಾಳಿಕೆಯೇ ತುಂಬಿದ್ದ ಆಡಳಿತಕ್ಕೆ ಹಿಡಿದ ಕೈಗನ್ನಡಿ.



ದಕ್ಷಿಣ ಭಾರತದಲ್ಲಿ ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡಿರುವುದರಲ್ಲಿ ಟಿಪ್ಪೂವಿಗೆ ಮತ್ಯಾವ ಮುಸ್ಲಿಮ್ ರಾಜರೂ ಸಾಟಿಯಿಲ್ಲ. ಲೂವಿಸ್ ರೈಸ್ ಎಂಬ ಬ್ರಿಟಿಷ್ ಇತಿಹಾಸಕಾರ ತನ್ನ Mysore Gazeteer ಪುಸ್ತಕದಲ್ಲಿ ಟಿಪ್ಪೂ ಸುಮಾರು ೮,೦೦೦ ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡಿದ್ದನೆಂದು ದಾಖಲಿಸಿದ್ದಾನೆ. ಮುಂದುವರಿದು, ಟಿಪ್ಪೂವಿನ ಸಾವಿನ ಸಮಯದಲ್ಲಿ ಅವನ ಸಾಮ್ರಾಜ್ಯದಲ್ಲಿ ಶ್ರೀರಂಗಪಟ್ಟಣದಲ್ಲಿದ್ದ ಕೇವಲ ಎರಡೇ ಹಿಂದೂ ದೇವಸ್ಥಾನಗಳಲ್ಲಿ ಮಾತ್ರ ಪೂಜೆ ನಡೆಯುತ್ತಿತೆಂದು ತಿಳಿಸುತ್ತಾನೆ. ವಾಸ್ತವವು ಹೀಗಿರಬೇಕಾದರೆ, ಶೃಂಗೇರಿ ದೇವಸ್ಥಾನಕ್ಕೆ ಟಿಪ್ಪೂ ತನ್ನ ರಾಜಕೀಯ ಹಿತಾಸಕ್ತಿಗೋಸ್ಕರ ನೀಡಿದ ದೇಣಿಗೆಯ ಏಕೈಕ ಉದಾರಹಣೆಯನ್ನೇ ಅವನ ಹಿಂದೂ ಪ್ರೇಮದ ಪ್ರತೀಕವೆಂದು ಹೇಳುವ ಮಾರ್ಕ್ಸ್ವಾದಿ ಬುದ್ಧಿಜೀವಿಗಳ ಆತ್ಮಸಾಕ್ಷಿ ಹೇಗೆ ಕೊಳೆತಿರಬಹುದು, ಯೋಚಿಸಿ.

ಬಹುಶಃ ಬ್ರಿಟಿಷರು ಟಿಪ್ಪೂವನ್ನು ಮಣಿಸಿ ಮತ್ತೆ ಮೈಸೂರು ಅರಸರಿಗೆ ಸಾಮ್ರಾಜ್ಯವನ್ನು ಹಿಂತಿರುಗಿಸದಿದ್ದರೆ, ದಕ್ಷಿಣ ಭಾರತದಲ್ಲಿ ಹಿಂದೂಗಳೇ ಇಲ್ಲಂದಂತಾಗಿರುತ್ತಿತ್ತೆನೋ? ಆ ವಿಷಯ ಹಾಗಿರಲಿ. ವಾಸ್ತವವಾಗಿ ಇತಿಹಾಸದಲ್ಲಿ ಟಿಪ್ಪೂವಿನ ಸ್ಥಾನವು ಮಹಮದ್ ಘಜ್ನಿ, ಘೋರಿ, ಅಲ್ಲಾವುದ್ದೀನ್ ಖಲ್ಜಿ ಮತ್ತು ಔರಂಗಜೇಬರ ಸಾಲಿಗೆ ಸೇರಬೇಕು. ಅವರೆಲ್ಲರಿಗೂ ಹಿಂದೂ ಭಾರತವನ್ನು ದಾರುಲ್-ಇಸ್ಲಾಮ್ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ಆ ಕಾರಣಕ್ಕಾಗಿಯೇ ಭಾರತ ವಿರೋಧಿ ಪಾಕಿಸ್ತಾನವು ತನ್ನ ಕ್ಷಿಪಣಿಗಳಿಗೆ ಇಂದು ಘಜ್ನಿ, ಘೋರಿ ಮತ್ತು ಟಿಪ್ಪೂವಿನ ಹೆಸರನ್ನಿಟ್ಟಿರುವ
ುದು. ಇಂತಹ ಭಾರತ ವಿರೋಧಿ ವ್ಯಕ್ತಿಗಳನ್ನು ಮಹಾನ್ ಹಿರೋಗಳಂತೆ ಚಿತ್ರಿಸಿ ಅವರ ನೆನಪಿನಲ್ಲಿ ರಸ್ತೆಗಳನ್ನು ನಾಮಕರಿಸಿ, ಜಯಂತಿಗಳನ್ನು ಆಚರಿಸುತ್ತಿರುವುದು ನಮ್ಮ ದೇಶದ ದೌರ್ಭಾಗ್ಯವೇ ಸರಿ. ನಮ್ಮ ಈ ದುಸ್ಥಿಗೆ ಹಾಗೂ historical amnesia ಗೆ ಭಾರತದ ಇತಿಹಾಸದಲ್ಲಿನ ಮುಸಲ್ಮಾನ ರಾಜರುಗಳ ಕ್ರೌರ್ಯ ಮತ್ತು ಹಿಂದೂ ದ್ವೇಷವನ್ನು whitewash ಮಾಡಿ, ಅವರನ್ನು ಮಹಾನ್ ಭಾರತ ಪ್ರೇಮಿಗಳಂತೆ ಸುಳ್ಳಾಗಿ ಬಿಂಬಿಸುವ ಎಡಪಂಥೀಯ ಬುದ್ಧಿಜೀವಿಗಳು ಹಾಗೂ ಮುಸ್ಲೀಮರ ಓಟಿಗಾಗಿ ಯಾವುದೇ ರಾಷ್ಟ್ರೀಯ ಹಿತಾಸಕ್ತಿಯನ್ನೂ ಬಲಿಕೊಡಲು ಸಿದ್ಧರಿರುವ ಶ್ರೀಮಾನ್ ಸಿದ್ಧರಾಮಯ್ಯನವರಂತಹ ಸೆಕ್ಯುಲರ್ ರಾಜಕಾರಣಿಗಳು ಕಾರಣ. ಹೀಗೆ ಇತಿಹಾಸದ ಸತ್ಯಗಳನ್ನು ಮರೆಮಾಚಿ, ಸುಳ್ಳನ್ನೇ ನಿಜವೆಂದು ಪ್ರತಿಪಾದಿಸಿ ಇತಿಹಾಸದಲ್ಲಿ ಕಂಡ ಮತಾಂಧ ವಿಲನ್ಗಳನ್ನುದೇಶಭಕ್ತ ಹಿರೋಗಳಂತೆ ಬಿಂಬಿಸುವುದರ ದುಷ್ಪರಿಣಾಮ ಏನು ಗೊತ್ತೇ? ಇಂದಿಗೂ ಭಾರತದಲ್ಲಿ ಕಾಣುವ ಮುಸ್ಲಿಂ ಮತಾಂಧತೆ ಮತ್ತು ಪ್ರತ್ಯೇಕತಾವಾದದ ಕೂಗು. ೧೯೯೦ರ ನಡು ರಾತ್ರಿಯಲ್ಲಿ ಉಟ್ಟ ಬಟ್ಟೆಯಲ್ಲಿ ಕಾಶ್ಮೀರಿ ಪಂಡಿತರನ್ನು ಮುಸ್ಲಿಂ ಪ್ರತ್ಯೇಕತಾವಾದಿಗಳು ಕಾಶ್ಮೀರದಿಂದ ಓಡಿಸಿದರಲ್ಲಾ, ಅಂದೇ ಈ ಸ್ವಘೋಷಿತ ಬುದ್ಧಿಜೀವಿಗಳು ಮಾಡಿಟ್ಟ ಯಡವಟ್ಟಿನ ಅರಿವು ನಮಗಾಗಬೇಕಿತ್ತು. ಬೆಂಗಳೂರು ಹಾಗೂ ಕೋಯಂಬತ್ತೂರಿನ ಬಾಂಬ್ ಸ್ಫೋಟಗಳಲ್ಲಿ ಕೈವಾಡವಿದೆಯೆಂಬ ಕಾರಣಕ್ಕೆ ಬಂಧಿಸಲಾಗಿದ್ದ ಅಬ್ದುಲ್ ನಾಸಿರ್ ಮದನಿಯನ್ನು ಮಾನವೀಯತೆಯ ಆಧಾರದ ಮೇಲೆ ಬಿಡುಗಡೆಗೊಳಿಸಬೇಕೆಂದು ೨೦೦೬ರಲ್ಲಿ ಕೇರಳ ವಿಧಾನಸಭೆ ಸರ್ವಾನುಮತದಿಂದ ನಿರ್ಣಯ ಪಾಸುಮಾಡಿದಾಗ ಇತಿಹಾಸವನ್ನು ತಿರುಚಿದ ಪರಿಣಾಮವನ್ನು ನಾವು ಅರ್ಥಿಸಿಕೊಳ್ಳಬೇಕತ್ತು. ಭಾರತದ ಸಂಸತ್ತಿನ ಮೇಲೆ ದಾಳಿ ಎಸಗಿ ಸರ್ವೋಚ್ಛ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾದ ಅಫ್ಜಲ್ಗೆ ಶಿಕ್ಷೆ ನೀಡಬಾರದೆಂದು ಜಮ್ಮು ಕಾಶ್ಮೀರದ ವಿಧಾನಸಭೆ ನಿರ್ಣಯವನ್ನು ಮಾಡಿದಾಗಲಾದರೂ ನಾವು ಎಚ್ಚೆತ್ತುಕೊಳ್ಳಬೇಕಿತ್ತು. ಭಾರತದ ಮೇಲೆ ಇಸ್ಲಾಮಿ ಭಯೋತ್ಪಾದಕರು ನೂರಾರು ಬಾರಿ ದಾಳಿಯನ್ನು ಮಾಡಿ, ಸಾವಿರಾರು ಮಂದಿ ಅಮಾಯಕರನ್ನು ಕೊಂದಾಗಲೂ, ‘Terror has no religion’ ಎಂದು ಬುದ್ಧಿಜೀವಿಗಳು ಬೊಬ್ಬೆ ಹೊಡೆದಾಗಲಾದರೋ ನಾವು ಇತಿಹಾಸ ತಿರುಚುವಿಕೆಯ ದುಷ್ಪರಿಣಾಮವನ್ನು ತಿಳಿಯಬೇಕಿತ್ತು. ಆದರೆ, ಇಂದಿಗೂ ನಾವು ಪಾಠವನ್ನು ಕಲಿತೇ ಇಲ್ಲ. ಹಿಂದೂಗಳನ್ನು ೧೫ ನಿಮಿಷದಲ್ಲಿ ಮುಗಿಸಿಹಾಕುತ್ತೇವೆ ಎಂದು ರಾಜಾರೋಷವಾಗಿ ಕಂಡ ಕಂಡಲ್ಲಿ ಭಾಷಣ ಮಾಡುವ ಒವೈಸಿ ಸಹೋದರರನ್ನು ಹಾಗೂ ಮುಸ್ಲಿಮ್ ಬಾಹುಳ್ಯ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ಅವರ ಪ್ರಭಾವವನ್ನು ಕಂಡೂ ಸುಮ್ಮನೆ ಕೂತಿರುವ ನಮಗೆ third grade historical amnesia ಅಲ್ಲದೇ ಮತ್ತಿನ್ಯಾವ ಖಾಯಿಲೆ?
ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಸತ್ಯವನ್ನು ತಿರುಚಿ ಔರಂಗಜೇಬ - ಟಿಪ್ಪೂನಂಥವರನ್ನು ಹಿರೋಗಳಾಗಿ ಬಿಂಬಿಸಿರುವ ಕಾರಣವೇ ಇಂದು ೨೫-೨೬ರ ಹರೆಯದ ಕೆಲವು ಮುಸ್ಲಿಮ್ ಯುವಕರುಗಳು ಐಸಿಸ್ ನಂತಹ ಉಗ್ರವಾದಿ ಸಂಘಟನೆಗಳಿಂದ ಆಕರ್ಷಿತರಾಗಿ ದೇಶ ಬಿಟ್ಟು ಭಯೋತ್ಪಾದಕರಾಗಲು ಹೊರಟಿರುವುದು. ನಾವು ನಮ್ಮ ಮಕ್ಕಳಿಗೆ ಔರಂಗಜೇಬ - ಟಿಪ್ಪೂನನ ಬದಲು ಸಂತ ಕಬೀರರನ್ನೋ, ಶಿಶುನಾಳ ಶರೀಫರನ್ನೋ ಆದರ್ಶವಾಗಿ ತೋರಿಸಿದ್ದರೆ, ಇಂದು ಮದನಿಗಳು ಮತ್ತು ಯಾಕುಬ್ ಮೆಮನ್ಗಳು ತಯಾರಾಗುತ್ತಿರಲಿಲ್ಲ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಲಾಮ್ರಂಥವರು ಹುಟ್ಟುತ್ತಿದ್ದರು. ದೌರ್ಭಾಗ್ಯವೆಂದರೆ ನಾವು ಇಂದಿಗೂ ನಮ್ಮತಪ್ಪನ್ನು ತಿದ್ದಿಕೊಂಡಿಲ್ಲ. ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ದುಡ್ಡಿಲ್ಲ ಎಂದು ಹೇಳಿದ ಶ್ರೀಮಾನ್ ಸಿದ್ಧರಾಮಯ್ಯನವರು, ಮತಾಂಧ ಟಿಪ್ಪೂವಿನ ಜಯಂತಿಯನ್ನು ರಾಜ್ಯದೆಲ್ಲೆಡೆ ಭರ್ಜರಿಯಾಗಿ ಆಚರಿಸಲು ಹೊರಟಿದ್ದಾರೆ. ರಾಜ್ಯದಲ್ಲಿ ಋಣಭಾರದಿಂದ ಧೃತಿಗೆಟ್ಟು ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಿಗೆ ಸಹಾಯ ಒದಗಿಸಲು ವಿಫಲವಾಗಿರುವ ಈ ಸರ್ಕಾರಕ್ಕೆ, ಟಿಪ್ಪೂ ಜಯಂತಿ ಆಚರಿಸಲು ತಾಲ್ಲೂಕಿಗೆ ತಲಾ ೨೫ ಸಾವಿರ ರೂಪಾಯಿಯನ್ನು ಕೊಡುವುದಕ್ಕೆ ಸಾಧ್ಯವಿದೆ. ನಾವಿಂದು ಟಿಪ್ಪೂ ಜಯಂತಿ ಯ ಆಚರಣೆಯ ವಿರುದ್ಧ ಪ್ರತಿಭಟಿಸದಿದ್ದರೆ, ಮುಂದೊಂದು ದಿನ ಮಾರ್ಕ್ಸ್ವಾದಿ ಬುದ್ಧಿಜೀವಿಗಳು ಮತ್ತು ಅವರ ಮಾತನ್ನು ಕಣ್ಮುಚ್ಚಿ ಕೇಳುವ ಸೆಕ್ಯುಲರ್ ರಾಜಕಾರಣಿಗಳು, ಧಾರ್ಮಿಕ ಸಹಿಷ್ಣುತೆಯ ಹೆಸರಿನಲ್ಲಿ ಭಯೋತ್ಪಾದಕ ಯಾಕುಬ್ ಮೆಮನ್ನ ಜಯಂತಿಯನ್ನೂ ಆಚರಿಸಿದರೆ ಯಾವುದೇ ಆಶ್ಚರ್ಯವಿರುವುದಿಲ್ಲ. ಅನುಲೇಖ: ಮೈಸೂರಿನ ಪ್ರಭುಗಳ ಪರವಾಗಿದ್ದರೆಂಬ ಕಾರಣದಿಂದ ರಾಣಿ ಲಕ್ಷ್ಮಮ್ಮಣ್ಣಿಯವರ ಪ್ರಧಾನರಾಗಿದ್ದ ತಿರುಮಲರಾವ್, ನಾರಾಯಣ ರಾವ್, ರಾಜಬಂಧು ಸುಬ್ಬರಾಜೇ ಅರಸು ಮೊದಲಾದವರ ಅಷ್ಟೂ ಪರಿವಾರಗಳನ್ನು ಟಿಪ್ಪೂ ಒಂದೇ ಬಾರಿಗೆ ಶ್ರೀರಂಗಪಟ್ಟಣದಲ್ಲಿನ ರಂಗನಾಥ ದೇವಾಲಯದ ಎದುರಿನ ಹುಣಸೇ ತೋಪಿನ ಮರಗಳಿಗೆ ನೇಣು ಹಾಕಿ ಕಗ್ಗೊಲೆ ಮಾಡಿದನೆಂದು ಇತಿಹಾಸದಲ್ಲಿ ದಾಖಲಾಗಿದೆ. ಆ ಕಗ್ಗೊಲೆ ನಡೆದಿದ್ದು ನರಕ ಚತುದರ್ಶಿಯಂದು. ಆದ್ದರಿಂದ ಆ ಕುಟುಂಬಗಳ ಪೀಳಿಗೆಗಳು ಇಂದಿಗೂ ನರಕ ಚತುರ್ದಶಿಯನ್ನು ಆಚರಿಸುವುದಿಲ್ಲ. ವಿಪರ್ಯಾಸವೆಂದರೆ ಈ ಬಾರಿಯ ನರಕ ಚತುರ್ದಶಿಯಂದು, ಅಂದರೆ ನವೆಂಬರ್ ೧೦ರಂದು ನಮ್ಮ ರಾಜ್ಯದ ಘನ ಸರ್ಕಾರವು ಟಿಪ್ಪೂ ಸಲ್ತಾನ್ನ ಜಯಂತಿಯನ್ನು ವಿಜೃಂಬಣೆಯಿಂದ ಆ ರಾಜ್ಯದೆಲ್ಲೆಡೆ ಭರ್ಜರಿಯಾಗಿ ಆಚರಿಸಲು ಹೊರಟಿದ್ದಾರೆ. ರಾಜ್ಯದಲ್ಲಿ ಋಣಭಾರದಿಂದ ಧೃತಿಗೆಟ್ಟು ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರಿಗೆ ಸಹಾಯ ಒದಗಿಸಲು ವಿಫಲವಾಗಿರುವ ಈ ಸರ್ಕಾರಕ್ಕೆ, ಟಿಪ್ಪೂ ಜಯಂತಿ ಆಚರಿಸಲು ತಾಲ್ಲೂಕಿಗೆ ತಲಾ ೨೫ ಸಾವಿರ ರೂಪಾಯಿಯನ್ನು ಕೊಡುವುದಕ್ಕೆ ಸಾಧ್ಯವಿದೆ. ನಾವಿಂದು ಟಿಪ್ಪೂ ಜಯಂತಿ ಯ ಆಚರಣೆಯ ವಿರುದ್ಧ ಪ್ರತಿಭಟಿಸದಿದ್ದರೆ, ಮುಂದೊಂದು ದಿನ ಮಾರ್ಕ್ಸ್ವಾದಿ ಬುದ್ಧಿಜೀವಿಗಳು ಮತ್ತು ಅವರ ಮಾತನ್ನು ಕಣ್ಮುಚ್ಚಿ ಕೇಳುವ ಸೆಕ್ಯುಲರ್ ರಾಜಕಾರಣಿಗಳು, ಧಾರ್ಮಿಕ ಸಹಿಷ್ಣುತೆಯ ಹೆಸರಿನಲ್ಲಿ ಭಯೋತ್ಪಾದಕ ಯಾಕುಬ್ ಮೆಮನ್ನ ಜಯಂತಿಯನ್ನೂ ಆಚರಿಸಿದರೆ ಯಾವುದೇ ಆಶ್ಚರ್ಯವಿರುವುದಿಲ್ಲ. ಅನುಲೇಖ: ಮೈಸೂರಿನ ಪ್ರಭುಗಳ ಪರವಾಗಿದ್ದರೆಂಬ ಕಾರಣದಿಂದ ರಾಣಿ ಲಕ್ಷ್ಮಮ್ಮಣ್ಣಿಯವರ ಪ್ರಧಾನರಾಗಿದ್ದ ತಿರುಮಲರಾವ್, ನಾರಾಯಣ ರಾವ್, ರಾಜಬಂಧು ಸುಬ್ಬರಾಜೇ ಅರಸು ಮೊದಲಾದವರ ಅಷ್ಟೂ ಪರಿವಾರಗಳನ್ನು ಟಿಪ್ಪೂ ಒಂದೇ ಬಾರಿಗೆ ಶ್ರೀರಂಗಪಟ್ಟಣದಲ್ ಲಿನ ರಂಗನಾಥ ದೇವಾಲಯದ ಎದುರಿನ ಹುಣಸೇ ತೋಪಿನ ಮರಗಳಿಗೆ ನೇಣು ಹಾಕಿ ಕಗ್ಗೊಲೆ ಮಾಡಿದನೆಂದು ಇತಿಹಾಸದಲ್ಲಿ ದಾಖಲಾಗಿದೆ. ಆ ಕಗ್ಗೊಲೆ ನಡೆದಿದ್ದು ನರಕ ಚತುದರ್ಶಿಯಂದು. ಆದ್ದರಿಂದ ಆ ಕುಟುಂಬಗಳ ಪೀಳಿಗೆಗಳು ಇಂದಿಗೂ ನರಕ ಚತುರ್ದಶಿಯನ್ನು ಆಚರಿಸುವುದಿಲ್ಲ. ವಿಪರ್ಯಾಸವೆಂದರೆ ಈ ಬಾರಿಯ ನರಕ ಚತುರ್ದಶಿಯಂದು, ಅಂದರೆ ನವೆಂಬರ್ ೧೦ರಂದು ನಮ್ಮ ರಾಜ್ಯದ ಘನ ಸರ್ಕಾರವು ಟಿಪ್ಪೂ ಸಲ್ತಾನ್ನ ಜಯಂತಿಯನ್ನು ವಿಜೃಂಬಣೆಯಿಂದ ಆಚರಿಸಲು ಮುಂದಾಗಿದೆ. ತಿರುಮಲರಾವ್, ನಾರಾಯಣರಾವ್ ಮತ್ತು ಸುಬ್ಬರಾಜೇ ಅರಸರನ್ನು ಹಾಗೂ ಅವರ ಹೌತಾತ್ಮ್ಯವನ್ನು ನಾವಿಂದು ಮರೆತಿದ್ದೇವೆ. ಬದಲಾಗಿ, ಹಂತಕನನ್ನು ಹುತಾತ್ಮನನ್ನಾಗಿಸಿದ್ದೇವೆ.


- ತೇಜಸ್ವೀ ಸೂರ್ಯ
(ಲೇಖಕರು ವಕೀಲರು ಮತ್ತು ಬಿ.ಜೆ.ಪಿ ಯುವ ಮುಖಂಡರು)

No comments:

Post a Comment